Tuesday 10 January 2023

ನಮ್ಮ ಮುದ್ದಿನ ಅಮ್ಮಮ್ಮ Our GrandMaa is No more.












Our Grand mother is No More. Today Morning at 3:15 AM. Tuesday. ಅಂಗಾರ ಚತುರ್ಥಿ. 

ಶ್ರೀಮತಿ ಗೌರಿ ವೆಂಕಟೇಶ ಬಾಯಿರಿ ಬಂಡಿಮಠ. ಬಾರಕೂರು ಹನೇಹಳ್ಳಿ. ಉಡುಪಿ ಜಿಲ್ಲೆ. 

🌼✍️📚🙏🌼🌼 ಅ ಮ್ಮ ಮ್ಮ 🌼🌼✍️📚😢✍️

ಅಮ್ಮಮ್ಮ ಅಂದರೆ ಹಾಗೆ,

ಮಕ್ಕಳ ಮೊಮ್ಮಕ್ಕಳ ಜೀವದ ಗಂಟು

ಕಳಚಿಕೊಳ್ಳಲಾಗದಷ್ಟು ಬೆಸೆದುಕೊಂಡಿರುವ ನಂಟು..

ತೇಗದ ಮರಗಳ ಮಾರಿ ಹೆಣ್ಮಕ್ಕಳ ಮದುವೆ ಮಾಡಿಸಿದರು

ಮಗಳ ಚೊಚ್ಚಲ ಬಾಣಂತನ ಆರೈಕೆ ಮಾಡಿ ಅಮ್ಮಮ್ಮ ಆಗಿ ಬಡ್ತಿ ಪಡೆದವರು..


ನೂರಾರು ಕಷ್ಟಗಳ ನಡುವೆ ಧೃತಿಗೆಡದೆ ತಮ್ಮ ಬದುಕ ಕಟ್ಟಿಕೊಂಡವರು

ಗಂಡ, ಮನೆ, ಮಕ್ಕಳಿಗಾಗಿ ಜೀವ ಜೀವನ ಸವೆಸಿದವರು..

ಹೆಸರುಕಾಳು, ಗೆಣಸು, ಹರಿವೆ ಗದ್ದೆಯಲ್ಲಿ ಬೆಳೆಸದ ಬೆಳೆಗಳಿಲ್ಲ

ಗೇಣಿ ನೀಡಿ ಬಂದ ಭತ್ತ ಹಣದಿಂದ ಮಕ್ಕಳ ಹೊಟ್ಟೆ ತುಂಬಿಸಿದರಲ್ಲ..


ಇಳಿವಯಸ್ಸಿನಲ್ಲಿ ಶಿಸ್ತಿನ ಜೀವನ ನಡೆಸಿದರು

ತನಗೇನು ಬೇಡ, ಎಲ್ಲ ನಿಮಗೆ ಇರಲಿ ಎಂದು ನೀಡಿದರು

ಮಕ್ಕಳು ಉಂಡರಾ? ಎಂದು ಕೇಳದೇ ತಾನು ಊಟ ಮಾಡಿದವರಲ್ಲ

ಮೊಮ್ಮಗು ಸನಿಹ ಬಂದರೆ ಖರ್ಜೂರದ ಚೂರನ್ನು ನೀಡದೇ ಕಳುಹಿಸುತ್ತಿರಲಿಲ್ಲ..


ಅಭ್ಯಂಜ ಸ್ನಾನ, ಅಶ್ವಿನಿ ಹೇರ್ ಆಯಿಲ್ ತಲೆಗೆ

ಸೊಪ್ಪಿನ ತಂಬುಳಿ ಇಲ್ಲದೇ ಊಟ ಸೇರುತ್ತಿರಲಿಲ್ಲ

ಹಣವಿದ್ದ ಅದೊಂದು ಸೇಫ್ಟಿ ಪರ್ಸ್ ತುಂಬಾ ಮಾತ್ರೆಗಳು

ಬಿಪಿ. ಶುಗರ್ ಜೀವ ಹಿಂಡುವಂತಹ ಕಾಯಿಲೆಗಳು

ಮಗನ ಜೊತೆ ಪುಣ್ಯಕ್ಷೇತ್ರ ರಾಮೇಶ್ವರ ಕಾಶಿಯ ದರುಶನ ಮಾಡಿದರು...


ಮರಿಮಕ್ಕಳ ಕಂಡ ಹಿರಿಯ ಜೀವಚೇತನ..

ಕೃಷ್ಣ🍁 ಕೃಷ್ಣ🍁 ಎನ್ನುವಾಗಲೇ ಕಡಿದುಕೊಂಡ ಭವಬಂಧನ..


✍️ ರಾಧಿಕಾ.. (ಮೊಮ್ಮಗಳು) 🌼🌼🌼🌼🌼🌼🌼🌼🌼🌼🌼🌼

No comments:

Post a Comment